Thursday, January 30, 2014

ಬಯಕೆ

ಬದೂವಿನ ಸೂತ್ತಲು  ಬೆಳೆದ ಬತ್ತ ,ಕಾಲು ದಾರಿಯನ್ನು ಅವಚಿಕೊಂಡು ದಟ್ಟವಾಗಿ ಒತ್ತಿಕೊಂಡಿತ್ತು.ಆಕೆ ಅದೇ ಉತ್ಸಾಹದಲ್ಲಿ
ಓಡುತಿದ್ದಳು.
  ನೀಲ್ಲು, ನೀಲ್ಲು '      ನಾನು ಕೂಗತ್ತಲೆ ಇದ್ದೆ.
  ಯಾ ಹೋ   '    ಆಕೆಯದು ದಣಿಯದ  ದನಿ.


ಒಂಟಿ ಮಾವಿನ ಮರ  ಒಂದೆ ಒಂದು  ಕಾಯಿ ಟೊಂಗೆಯ ತುದಿಯಲಿ.

ಕಲ್ಲು ಎಸೆದು, ಎಸೆದು, ಆಕೆ ಸುಸ್ತು.

ಆಕೆಯ ಹಿಂದೆ ಓಡಿದ ದಣಿವು,ಉಸಿರು, ನನಗೆ

ನನಗೆ ಆ   ಮಾವಿನ ಕಾಯಿ ಬೇಕು.ಆಕೆಯ ಆದೇಶ.

ಬೀಸಿದ ಕಲ್ಲು ಗುರಿ ತಲುಪಲಿಲ್ಲ.

ಮರ ಹತ್ತು,

ಭಯ ಟೊಂಗೆ ಪೊಳ್ಳಾಗಿದೆ

ನನಗೆ ಗೊತ್ತಿಲ್ಲ ನನಗೆ ಮಾವಿನ ಕಾಯಿಬೇಕು

ಮರ ಎರತೊಡಗಿದೆ,ನಡಗುತ್ತ  ಜಾರುತಿರುವ ಕಾಲನ್ನು ಒತ್ತಿ ಹಿಡಿದೆ ಕೈ ನಡಗುತ್ತಿತ್ತು,ಮರದ ತುತ್ತ ತುದಿಯಲಿ ನಾನು.
ಹುಳಿ ಹುಳಿ ಕಾಯಿಗೆ ಕೈ ಹಾಕಿದೆ. ಕಾಯಿ ಸಿಕ್ಕಿತು.

ಕೆಳಗೆ ನೋಡಿದೆ

ಆಕೆ ಕಾಣುತ್ತಲೇ ಇಲ್ಲ.


ಸುಮ್ಮನೀರು

ಮುಗಿಲೆತ್ತರ ಚಾಚಿದ  ಆಲದ ಮರದ ಟೊಂಗಗಳೆಲ್ಲಾ ನೆಲಕ್ಕೆ ಇಳಿಬಿದ್ದು ರಸ್ತೆಯನೆಲ್ಲಾ ಆಕ್ರಮಿಸಿಕೊಂಡಿದ್ದವು.ಅವಳು ಬರುತ್ತಾಳೆಂಬ ನೀರಿಕ್ಷೆ ಕಾಡುತಿತ್ತು.ಒಂಟಿಯಾದ ಟಾರು ರಸ್ತೆ, ಅವಳ ಹೆಜ್ಜೆಯ ಸ್ಪರ್ಶಕ್ಕಾಗಿ ಅಂಗಾತ ಮಲಗಿಕೊಂಡಿತ್ತು.

 ತೆಳುವಾದ ಕೆಂಪು ಸ್ವೆಟರನ್ನು ಅವಚಿಕೊಂಡು ,ನೀಲಿಕೋಡೆಯನ್ನು ಗಾಳಿಯ ತೊಲಲಾಟದಲ್ಲಿ ಅಲಗಾಡಿಸುತ್ತ ಮೇತ್ತನೆ ಹೆಜ್ಜೆಯನ್ನು ಇಡುತ್ತ ಅವಳು ಬಂದಳು.

ಅವಳ ಎದುರಿಗೆ ಮುಗಿಲ ನೋಡುತ್ತ ನಿಂತೆ.
ಅವಳ ಕಣ್ಣಲ್ಲಿ ಆಶ್ಚರ್ಯ,ದುಗುಡ ,ಆತಂಕ

"ಅರಾಮ ಅದಿ'
'
ಹೆಂಗೋ ಅದಿನಿ'

ನೀನ್ಯಾಕೆ ಇಲ್ಲಿಗೆ ಬಂದಿ
       ಮಾತು ಬರಲಿಲ್ಲ ,ಕಣ್ಣು ತಂಪಾದವು.
'ಸ್ವಾರ್ಥಿಯಾಗಬೇಡ'
                 ಅವಳು ಮೌನವಾಗಿ ಮುಂದೆಹೊದಳು.
ಅವಳ ಕಂಕುಳಲ್ಲಿ ಕುಳಿತ ಮಗು ನನ್ನನ್ನೆ ದಿಟ್ಟಿಸುತಿತ್ತು.

ಹೋಗಿ ಎತ್ತಿಕೊಳ್ಳಲೇ ?

ಬೇಡ ನಾವೀಗ ಅಪರಿಚಿತರು.