ಬೆಣ್ಣಿಯಹಳ್ಲದ ಮ್ಯಾಗ ನೂರೊಂದು ಕುರಿ ಬಿದ್ದುತಿಳಿನೀರ ಕೆಂಪಾಗಿ ತಿರ್ಥವಾಯಿತೊ
ಎರಿಮಣ್ಣ ಹೊಲದಲ್ಲಿ ಕಬ್ಬಿಣ ಕ್ವಾರಿ ಬಿದ್ದು
ಎರಕಲುಬಡಿಯಲ್ಲ ಮಹಲಾಯಿತೊ
ರೆಂಟೆಯ ನೊಗಕೆಲ್ಲ ಉಕ್ಕಿನ ಸರಪಳಿ ಬಿದ್ದು
ಬಿಳಿಎತ್ತ ಚೆಂಡು ರಕ್ತವಾಯಿತೊ
ಹುಂಚಿಯ ಗಿಡಕ್ಕೆ ಬಾವಲಿ ಜೋತಬಿದ್ದು
ಕತ್ತಲ್ಲೆಲ್ಲ ಬೆಳಕಾಗಿ ತುರಾಡಿತೊ
ಖಾದಿಯ ಮಡಕಿಯೊಳಗ ಗಾಂಧಿಯನೋಟ ಕೊಳೆತು
ಹಸಿವಿನ ಕುಗೂ ಹಾಡಾಯಿತೋ
No comments:
Post a Comment