Sunday, August 25, 2013

ನೀ..!

ನನ್ನ ನಾನರಿಯದೆ ನಿನ್ನನ್ನರಿಯಲು ಹೊಗಿ
ಎಡವಿ ಬಿದ್ದೆ .  ನೀ ಓಡುತ್ತಲೇ  ಇದ್ದೆ.

ನನ್ನಲ್ಲಿ ನಿನ್ನ ಕಂಡು  ನಿನ್ನಂತಾಗಿ
ಖಾಲಿಯಾದೆ  ನೀ ತುಂಬಿ ಕೊಂಡೆ

Saturday, August 24, 2013

ಬಯಲು

ಬೆಣ್ಣಿಯಹಳ್ಲದ ಮ್ಯಾಗ ನೂರೊಂದು ಕುರಿ ಬಿದ್ದು
ತಿಳಿನೀರ ಕೆಂಪಾಗಿ ತಿರ್ಥವಾಯಿತೊ

ಎರಿಮಣ್ಣ ಹೊಲದಲ್ಲಿ ಕಬ್ಬಿಣ ಕ್ವಾರಿ ಬಿದ್ದು
ಎರಕಲುಬಡಿಯಲ್ಲ ಮಹಲಾಯಿತೊ

ರೆಂಟೆಯ ನೊಗಕೆಲ್ಲ ಉಕ್ಕಿನ ಸರಪಳಿ ಬಿದ್ದು
ಬಿಳಿಎತ್ತ ಚೆಂಡು ರಕ್ತವಾಯಿತೊ

ಹುಂಚಿಯ ಗಿಡಕ್ಕೆ ಬಾವಲಿ ಜೋತಬಿದ್ದು
ಕತ್ತಲ್ಲೆಲ್ಲ ಬೆಳಕಾಗಿ ತುರಾಡಿತೊ

ಖಾದಿಯ ಮಡಕಿಯೊಳಗ ಗಾಂಧಿಯನೋಟ ಕೊಳೆತು
ಹಸಿವಿನ ಕುಗೂ ಹಾಡಾಯಿತೋ