Thursday, August 29, 2013

ಬೆಚ್ಚಗಿತ್ತು ಬಿಸಿಮಾತು ,ಅಚ್ಚದೆ ಉಳಿಯಲಿಲ್ಲ
ಕಪ್ಪಗಿತ್ತು ಬಿಳಿಮೊಡ  ಸುಮ್ಮನೆ ನಿಲ್ಲಲಿಲ್ಲ
ಕಣ್ಣು ತುಂಬಿತ್ತು ಹನಿ ಉದರಲಿಲ್ಲ
ಮಾತು ಉಕ್ಕುತ್ತಿತ್ತು ಮೌನ ಮುರಿಯಲಿಲ್ಲ


ಒಂಟಿಯಲ್ಲ ಆ ಹೆಮ್ಮರ ,ನಾನು ಅಪ್ಪಿಕೊಳ್ಳುವೆ
ಉದುರಿದ ಎಲೆಯ ನೆನಪಲ್ಲಿ ನೆಪವಾಗಿ
ನೆರಳ ಬಿಂಬದಲಿ ಆಕೃತಿಯಾಗಿ 
ನನ್ನದೆಯ ಉಸಿರು ತಾಗಿಸುತ್ತ ಅದರ ಉಸಿರು ಎಳೆಯುತ್ತ..............

Wednesday, August 28, 2013

ಮುನಿಯಬೇಡ ನೀನು
ಮುರಿದ ಮನಕೆ ಬೆಸುಗೆ ಬೇಡ
ಕತ್ತರಿಸಿದ ಕರುಳಿಗೆ ಕರುಣೆ ಬೇಡ
ಕಳೆದುಹೋದ ಕಾಲ ನೆನಪಿಸಬೇಡ
ದಿಕ್ಕರಿಸಿದ ದಾರಿಯಲಿ ನಡೆಯಬೇಡ
ಸೋಲಿಸಿದ ಆಟವನು ಆಡಬೇಡ
ಕಾಡಿಸಿದ ಕವಿತೆ ಹಾಡಬೇಡ


ನೀನ್ನ ಮೌನದಲಿ ಮಾತು ಅಡಗಿದೆ
ಸುಮ್ಮನಿದ್ದಷ್ಟು ಕಾಡಬೇಡ, ನೀ ದೂರ
ಹೋದಷ್ಟು ನೀನ್ನ ಮುಗ್ದತೆ ಸೆಳೆಯುತ್ತೆ

Tuesday, August 27, 2013

ಮತ್ತೆ ಸುರಿಯುವೆ

ಹಳ್ಳ ಊಕ್ಕಿ ,ಬತ್ತಿ,ಮತ್ತೆ ತಣ್ಣಗೆ ಹರಿಯುತ್ತಿದೆ
ಮರ ಹೂವಾಗಿ ,ಬರಡಾಗಿ ಮತ್ತೆ  ಚಿಗಿಯುತ್ತಿದೆ
ಮೊಡ ಸುರಿದು ಬಯಲಾಗಿ ಮತ್ತೆ ಉದುರುತ್ತಿದೆ
ಬಿಟ್ಟುಬಿಡು ಗೆಳೆಯ ನಾನೀಗ ಅವಳಲ್ಲ ,
ಹೊಸ ಟೊಂಗೆಯ ಮೇಲಿನ ಗೂಡು.
ನೀನ್ನಷ್ಟು ಗಡಸು ಇಲ್ಲದಿದ್ದರೂ ಪ್ರೀತಿ ಇದೆ
ಆ ಮರದ ನೆರಳಲ್ಲಿ ಹಳೆಯ ನೆನಪು ಮರೆತು
ಮತ್ತೆ ಕನಸು ಕಾಣುವೆ.

Monday, August 26, 2013

ಸಂಜೆ

ಸಂಜೀ ಅಂದ್ರ ಭಾಳ ಖುಷಿ ಅಕೈತಿ . ಆ ಸುರ್ಯ ತನ್ನ ಮನೆಗೆ ತಾ ಹೊಂಟ್ರ ನನ್ನ ಕಣ್ಣಾಗ ಕಾಯ್ದ ನಿರೀಕ್ಷೆ ಮುಗಿದ ಕ್ಷಣ ಈ ಸಂಜೆ.      ಗೋಧೊಳಿ ಕಾಲ, ಎತ್ತು ಎಮ್ಮಿ ಆಕಳ ಢರಕಿ ಹಾಕಿದ್ರ ಹಕ್ಯಾಗಿನ ಸಣ್ಣ ಕರುಗಳೆಲ್ಲಾ ಅವ್ವ ಅಪ್ಪನ ಕೂಡು ಆಸೆದಾಗ ಮನೆತುಂಬ ಚಿರಾಡಿ ಒಡೊಡಿ ಬರುವ ದನಗಳಿಗೆಲ್ಲಾ ಎದರಗೊಳ್ಳತಿದ್ದ ಕಾಲ.
ನಾನು ಅಷ್ಟ .ಸಂಜೀ ಮುಂದ ಬರೀ ಕಾತುರ ,ಹೊಲಕ್ಕ ಹೋದ ಅಪ್ಪ , ಸಂತಿಗಿ ಹೋದ ಅವ್ವ.ಯಾವಗ ಒಳ್ಳಿ ಬರತಾರು ಎನೇನ ತರತಾರು.  ಅಂತ ಕಾಯ್ದ ಸಂಜೆಗಳಿಗೆ ಲೆಕ್ಕಕಿಲ್ಲ. 

Sunday, August 25, 2013


ನೀ..!

ನನ್ನ ನಾನರಿಯದೆ ನಿನ್ನನ್ನರಿಯಲು ಹೊಗಿ
ಎಡವಿ ಬಿದ್ದೆ .  ನೀ ಓಡುತ್ತಲೇ  ಇದ್ದೆ.

ನನ್ನಲ್ಲಿ ನಿನ್ನ ಕಂಡು  ನಿನ್ನಂತಾಗಿ
ಖಾಲಿಯಾದೆ  ನೀ ತುಂಬಿ ಕೊಂಡೆ

Saturday, August 24, 2013

ಬಯಲು

ಬೆಣ್ಣಿಯಹಳ್ಲದ ಮ್ಯಾಗ ನೂರೊಂದು ಕುರಿ ಬಿದ್ದು
ತಿಳಿನೀರ ಕೆಂಪಾಗಿ ತಿರ್ಥವಾಯಿತೊ

ಎರಿಮಣ್ಣ ಹೊಲದಲ್ಲಿ ಕಬ್ಬಿಣ ಕ್ವಾರಿ ಬಿದ್ದು
ಎರಕಲುಬಡಿಯಲ್ಲ ಮಹಲಾಯಿತೊ

ರೆಂಟೆಯ ನೊಗಕೆಲ್ಲ ಉಕ್ಕಿನ ಸರಪಳಿ ಬಿದ್ದು
ಬಿಳಿಎತ್ತ ಚೆಂಡು ರಕ್ತವಾಯಿತೊ

ಹುಂಚಿಯ ಗಿಡಕ್ಕೆ ಬಾವಲಿ ಜೋತಬಿದ್ದು
ಕತ್ತಲ್ಲೆಲ್ಲ ಬೆಳಕಾಗಿ ತುರಾಡಿತೊ

ಖಾದಿಯ ಮಡಕಿಯೊಳಗ ಗಾಂಧಿಯನೋಟ ಕೊಳೆತು
ಹಸಿವಿನ ಕುಗೂ ಹಾಡಾಯಿತೋ